fbpx

ಪ್ರತಿಯೊಂದು SEO ತಂತ್ರವು ಈ ಕೆಳಗಿನ 5 ಅಂಶಗಳಿಂದ ಪ್ರಯೋಜನ ಪಡೆಯಬಹುದು. ಅವುಗಳನ್ನು ಬಳಸಿ ಅವುಗಳಿಂದ ದೀರ್ಘಕಾಲದ ಉಪಯೋಗವನ್ನು ಪಡೆಯಬಹುದು.

Table of Contents

ಪ್ರತಿ ಎಸ್‌ಇಒ ತಂತ್ರಕ್ಕೆ ಅಗತ್ಯವಿರುವ ಐದು ವಿಷಯಗಳು ಇಲ್ಲಿವೆ.

 

  1. ಮೈಂಡ್ ಮ್ಯಾಪ್

 

ಮೈಂಡ್ ಮ್ಯಾಪ್ ಎನ್ನುವುದು ನಮ್ಮ ಮೈಂಡ್ ನಲ್ಲಿ ನಮ್ಮ ಸ್ವಂತ ಶಕ್ತಿಯಿಂದ ಯೋಚಿಸುವ ಮ್ಯಾಪ್ ಅಥವಾ ಒಂದು ಬ್ಲೂ ಪ್ರಿಂಟ್ ಎನ್ನಬಹುದು. ಇದು ನಿಮ್ಮ ಅಂತಿಮ ಕಾರ್ಯತಂತ್ರದ ದೃಶ್ಯೀಕರಣವಲ್ಲ. ನಿಮ್ಮ ಯೋಜನೆಯನ್ನು ಪ್ರಸ್ತುತಪಡಿಸಲು ನಿಮಗೆ ಸಹಾಯ ಮಾಡಲು ಮನಸ್ಸಿನ ನಕ್ಷೆಯು ಅಸ್ತಿತ್ವದಲ್ಲಿದೆ, ಆದರೆ ಅದರ ಬಗ್ಗೆ ಯೋಚಿಸಲು ನಿಮಗೆ ಸಹಾಯ ಮಾಡುತ್ತದೆ. ಮೈಂಡ್ ಮ್ಯಾಪ್‌ಗಳು ನಿಮ್ಮ ಆಲೋಚನಾ ಪ್ರಕ್ರಿಯೆಯನ್ನು ಊಹಿಸಲು ಸಹಾಯ ಮಾಡುವ ಸಾಧನಗಳಾಗಿವೆ. ಹೇಗೆ ಎಂದರೆ ನಿಮ್ಮ ಮೈಂಡ್ ನಲ್ಲಿ ಯೋಚಿಸುವ ಉಪಾಯಗಳನ್ನು ಒಟ್ಟುಗೂಡಿಸಿ ಅದನ್ನು ಕಾರ್ಯ ರೂಪಕ್ಕೆ ತಂದು ಅದರಿಂದ ಯಶಸ್ಸನ್ನು ಪಡೆಯಬಹುದಾಗಿದೆ.

 

  1. ಎ ವಿಷುಯಲ್ ರೆಪ್ರಸೆಂಟೇಷನ್

 

ಒಂದೊಮ್ಮೆ ನಮ್ಮ SEO ತಂತ್ರವು ಹೆಚ್ಚು ಕಠಿಣ  ಆಗಿದ್ದರೆ, ನಮ್ಮ ಮೈಂಡ್ ಮ್ಯಾಪ್‌ಗಿಂತ ಹೆಚ್ಚು ಆಳವಾದ ಉಪಾಯದ ಅಗತ್ಯವಿರುತ್ತದೆ.

ಇದರರ್ಥ ನೀವು ಗುರಿಗಳನ್ನು ಹೊಂದಿದ್ದೀರಿ, ಆ ಗುರಿಗಳಿಗೆ ನಿರ್ದಿಷ್ಟ ಕಾರ್ಯಗಳನ್ನು ಲಗತ್ತಿಸಲಾಗಿದೆ. ಆದ್ದರಿಂದ ನೀವು SEO ಮಾಡುವಾಗ ಅದನ್ನು ಇನ್ನೊಬ್ಬರಿಗೆ ಅಂದರೆ ನಿಮ್ಮ ಕ್ಲೈಂಟ್ ಅಥವಾ ನಿಮ್ಮ ಟೀಮ್ ಗಾದರು ಆಗಲಿ, ಸರಿಯಾದ ರೀತಿಯಲ್ಲಿ ಅರ್ಥೈಸುವಂತಿರಬೇಕು.

ಒಂದು ಸಹಜ ಫಾರ್ಮಟ್ನಲ್ಲಿ ನಿಮ್ಮ SEO ಕಾರ್ಯವನ್ನು ಉಲ್ಲೇಖಿಸಿ ತಿಳಿಸಬೇಕು. ನೀವು ಯಾವುದೇ ನಿಮ್ಮ ಕಂಫರ್ಟ್ ಗೆ ಸರಿ ಹೊಂದುವ ಟೂಲ್ಸ್ ಗಳನ್ನೂ ಬಳಸಬಹುದು ( ಗೂಗಲ್ ಶೀಟ್‌ಗಳು, ಟ್ರೆಲ್ಲೊ, ವರ್ಕ್‌ಝೋನ್, ಬೇಸ್‌ಕ್ಯಾಂಪ್). ಆಗ ನಿಮ್ಮ ಟೀಮ್ /ಕ್ಲೈಂಟ್ ನಿಂದ  ಪರ್ಟಿಕ್ಯುಲರ್ ವೆಬ್ಸೈಟ್ ಗೆ ಇನ್ನು ಹೆಚ್ಚು SEO ಉಪಾಯ/ತಂತ್ರಗಳನ್ನು ಪಡೆಯಬಹುದು.

 

 

  1. ಕಂಪನಿಯ ತಿಳುವಳಿಕೆ

 

ಯಾವುದೇ ಎಸ್‌ಇಒ ತಂತ್ರವನ್ನು ಯಶಸ್ವಿಯಾಗಿಸಲು ನೀವು ಕಂಪನಿಯ ಬಗ್ಗೆ ದೃಢವಾದ ತಿಳುವಳಿಕೆಯನ್ನು ಹೊಂದಿರಬೇಕು. ನಿಮ್ಮ ವೆಬ್ಸೈಟ್ ಗೆ rank ತರಬೇಕು, ನಿಮ್ಮ ವೆಬ್ಸೈಟ್ ಗೆ SEO ಒಂದು ಒಳ್ಳೆಯ ವ್ಯಾಲ್ಯೂ ತರಬೇಕು, ಜನರು ನಿಮ್ಮ ಬ್ರಾಂಡ್ ಗುರುತಿಸುವಂತಾಗಬೇಕು ಹೀಗೆ ಮುಂತಾದವುಗಳು ಆಗಬೇಕೆಂದಿದ್ದರೆ ಮೊದಲು ನಿಮ್ಮ ಕಂಪನಿ ಬಗ್ಗೆ ಸರಿಯಾದ ತಿಳುವಳಿಕೆ ಹೊಂದಿರಬೇಕು.

 

  1. ಆಡಿಯನ್ಸ್ ಗಳ ( ವೆಬ್ಸೈಟ್ಗೆ ಬರುವ ಜನರ ) ತಿಳುವಳಿಕೆ / ವೆಬ್ಸೈಟ್ ಬಳಕೆದಾರರ ತಿಳುವಳಿಕೆ

 

ನಿಮ್ಮ ಪ್ರೇಕ್ಷಕರು ಯಾರೆಂದು ನೀವು ತಿಳಿದುಕೊಳ್ಳಬೇಕು. ನಿಮ್ಮ ವೆಬ್ಸೈಟ್ ಅನ್ನು ಎಷ್ಟು ಜನ ಲೈಕ್ ಮಾಡುತ್ತಾರೆ, ನಿಮ್ಮ ಪ್ರಾಡಕ್ಟ್ ನ್ನು ಇಷ್ಟ ಪಡುವ ಪ್ರೇಕ್ಷರು ಎಷ್ಟು, ಯಾವ ತರಹದ, ಯಾವ ವಯಸ್ಸಿನ ಪ್ರೇಕ್ಷಕರು ನಿಮ್ಮ ಪ್ರಾಡಕ್ಟ್ ಅನ್ನು ಇಷ್ಟಪಡಬಹುದು ಇವೆಲ್ಲ ತಿಳಿದುಕೊಳ್ಳುವುದು ಬಹಳ ಮುಖ್ಯ. ಹಾಗೆಯೇ ಇದರಿಂದ ಜನರು ಯಾವ ತರಹದ ಕೀವರ್ಡ್ ಅನ್ನು ಬಳಸುತ್ತಾರೆ ಎಂಬುದು ಕೂಡ ಸ್ಪಷ್ಟ ವಾಗಿ ತಿಳಿದುಕೊಳ್ಳಬಹುದು.

 

  1. ನಿಖರವಾದ ಗುರಿಗಳು

 

ನಾವು ಯಾವುದೇ ಕೆಲಸ ಮಾಡಬೇಕಾದರೂ ಒಂದು ನಿಖರವಾದ ದೃಢವಾದ ಗುರಿಯನ್ನು ಇಟ್ಟುಕೊಂಡು ಮಾಡಬೇಕು. ಹಾಗೆಯೇ ಇಲ್ಲಿಯೂ ಒಂದು ನಿಖರ ಗುರಿ ಎಂದರೆ ನಿಮ್ಮ ವೆಬ್ಸೈಟ್ ಗೆ ಮಾಡಬೇಕಾದ SEO, ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಹೇಗೆಂದರೆ ನಿಮ್ಮ ವೆಬ್ಸೈಟ್ ಗೆ rank ಸಿಗುವುದರ ಮೂಲಕ ಅಥವಾ ನಿಮ್ಮ ವೆಬ್ಸೈಟ್ ಗೆ ಒಂದು ಒಳ್ಳೆಯ ವ್ಯಾಲ್ಯೂ ಸಿಗುವ ಮೂಲಕ ಜನರಿಗೆ ಬೇಗ ಹತ್ತಿರವಾಗುವಂತಾಗುತ್ತದೆ.

 

ಹೌದು, ಆದಾಯವು ವೆಚ್ಚಕ್ಕಿಂತ ವೇಗವಾಗಿ ಹೆಚ್ಚಾಗಬೇಕೆಂದು ನಾವು ಬಯಸುತ್ತೇವೆ. ಅದಕ್ಕೆ ನಾವು ಸುಮ್ಮನೆ ಕುಳಿತರೆ ಏನು ಮಾಡಲು ಸಾಧ್ಯವಿಲ್ಲ . ನಾವು ನಮ್ಮಗುರಿಯನ್ನು ಸೆಟ್ ಮಾಡಿಕೊಳ್ಳಬೇಕು. SEO ಕಾರ್ಯತಂತ್ರವು, ಕಂಪನಿಯ  ನಿರ್ದೇಶನ ಮತ್ತು ಭವಿಷ್ಯದ ಮೇಲೆ ನಿರ್ದಿಷ್ಟ ಪ್ರಭಾವವನ್ನು ಬೀರುವ ಗುರಿಗಳನ್ನು ಸಾಧಿಸುವುದು ಮತ್ತು ವ್ಯವಹಾರವು ಸ್ವತಃ ಕಾರ್ಯನಿರ್ವಹಿಸುವ ತರಹ ಮಾಡುವ ವಿಧಾನವಾಗಿದೆ. ಈ ಕಾರಣಕ್ಕೆ ಒಂದು ನಿರ್ದಿಷ್ಟ ಗುರಿಗಳನ್ನು ಹೊಂದಿರಬೇಕು ಆ ಗುರಿಗಳನ್ನು ಸಾಧಿಸಲು ನಮ್ಮ ಸಂಪೂರ್ಣ ಪ್ರಯತ್ನ ಮಾಡಬೇಕು.

 

ಹೀಗಾಗಿ ಈ SEO ತಂತ್ರಗಳ ಐದು ಅಂಶಗಳನ್ನು ಮನದಲಿಟ್ಟುಕೊಂಡರೆ ಬಹಳಷ್ಟು ಪ್ರಯೋಜನ ಪಡೆಯಬಹುದು. ಅವುಗಳನ್ನು ನಿಮ್ಮ ಚೌಕಟ್ಟಿನಲ್ಲಿ ನಿರ್ಮಿಸಿ ಮತ್ತು ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸುವ ಮಾರ್ಗವನ್ನು ಹುಡುಕಿಕೊಂಡರೆ ನಿಮ್ಮ ಬ್ಯುಸಿನೆಸ್ ಒಂದು ಹಂತವನ್ನು ತಲುಪಲು ಭದ್ರ ಬುನಾದಿಯಾಗುತ್ತದೆ.

Share this post

Get digital marketing Strategy for free