fbpx

Digital Marketing Course: ಅತ್ಯಂತ ಹೆಚ್ಚು ಬೇಡಿಕೆ ಇರುವ ಈ ಕೋರ್ಸ್ ಮಾಡಿದ್ರೆ ಕೈತುಂಬಾ ಸಂಬಳ

Table of Contents

ಈಗ ವಿದ್ಯಾರ್ಥಿಗಳು 3 ಅಥವಾ 4 ವರ್ಷಗಳ ಪದವಿ ಕೋರ್ಸ್ ಅನ್ನು ಅವಲಂಬಿಸಿಲ್ಲ. ಡಿಗ್ರಿಗಳನ್ನು ಓದುವ ಬದಲು ಯುವ ಪೀಳಿಗೆಯು ಈಗ ಗುಣಮಟ್ಟದ ಶಿಕ್ಷಣ ಅಥವಾ ಅಂತಹ ಡಿಪ್ಲೊಮಾ ಕೋರ್ಸ್ ಗಳನ್ನು ಅಧ್ಯಯನ ಮಾಡುತ್ತಿದೆ.
ಈ ಕೋರ್ಸ್ ಗಳ ಮೂಲಕ ತಕ್ಷಣವೇ ಉದ್ಯೋಗಗಳನ್ನು ಪಡೆಯಬಹುದು. ಅಂತಹ ಕೋರ್ಸ್ ಗಳಲ್ಲಿ ಅತಿ ಹೆಚ್ಚು ಡಿಮ್ಯಾಂಡ್ ನಲ್ಲಿರುವ ಕೋರ್ಸ್ ಡಿಜಿಟಲ್ ಮಾರ್ಕೆಟಿಂಗ್. ಮುಂದಿನ ಕೆಲವು ವರ್ಷಗಳಲ್ಲಿ, ಇದು ಎಲ್ಲೆಡೆ ವ್ಯಾಪಿಸಲಿದೆ. ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಮುಗಿದ ತಕ್ಷಣ, ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಲಭ್ಯವಿವೆ.ಅದರಲ್ಲೂ ಇದರ ಒಂದೊಂದು ವಿಭಾಗಗಳೂ ವಿಫುಲ ಅವಕಾಶವನ್ನು ತೆರೆದಿಡುವುದರಿಂದ ದಿನದಿಂದ ದಿನಕ್ಕೆ ಒಂದೊಂದು ವಿಭಾಗಗಳೂ ಹೊಸ ಕ್ಷೇತ್ರಕ್ಕೆ ಎಡೆ ಮಾಡಿಕೊಡುತ್ತಿವೆ. ಅದರ ಕೆಲವು ವಿಭಾಗಗಳನ್ನು ನಾವಿಲ್ಲಿ ಪರಿಚಯಿಸಲಿದ್ದೇವೆ.

1. ವೆಬ್ ಸೈಟ್ ವಿನ್ಯಾಸ: ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಮತ್ತು ಅದರಲ್ಲಿ ಬೆಳವಣಿಗೆಯನ್ನು ಸಾಧಿಸಲು, ವೆಬ್ಸೈಟ್ ವಿನ್ಯಾಸವು ಅಗತ್ಯ ಸ್ಕಿಲ್‌ ಆಗಿರುತ್ತದೆ. ವರ್ಡ್‌ಪ್ರೆಸ್‌, ಪಿಎಚ್‌ಪಿ, ಪೈಥಾನ್‌, ಶಾಪಿಫೈ ನಂತಹ ಅನೇಕ ವಿಧಾನಗಳನ್ನು ಬಳಸಿ, ಇಂದಿನ ದಿನಗಳಲ್ಲಿ ವೆಬ್‌ಸೈಟ್‌ ಮಾಡಬಹುದಾಗಿದೆ.
2. ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್: ಈ ದಿನಗಳಲ್ಲಿ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ವ್ಯಾಪಾರವು ಸಾಮಾಜಿಕ ಮಾಧ್ಯಮದ ಆಧಾರದ ಮೇಲೆ ಬೆಳವಣಿಗೆಯನ್ನು ಸಾಧಿಸುತ್ತಿದೆ. ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ನೊಂದಿಗೆ, ಕ್ಲೈಂಟ್ ನ ಪ್ರೊಫೈಲ್ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಲ್ಲಿ ಕಾಣಿಸಿಕೊಳ್ಳಬಹುದು ಹಾಗೂ ಅದರ ಮೂಲಕ ವೆಬ್‌ಸೈಟ್‌ಗೆ ಗ್ರಾಹಕರನ್ನು ಕರೆತರುವ ಯೋಜನೆಯನ್ನು ರೂಪಿಸುವುದಕ್ಕೆ ವಿಶಿಷ್ಠ ಅವಕಾಶಗಳಿವೆ.
3. ಇಮೇಲ್ ಮಾರ್ಕೆಟಿಂಗ್: ವ್ಯವಹಾರವನ್ನು ಅಗತ್ಯವಿರುವ ವ್ಯಕ್ತಿಗೆ ತಲುಪಿಸಲು ಇಮೇಲ್ ಮಾರ್ಕೆಟಿಂಗ್ ಉತ್ತಮ ಸಾಧನವಾಗಿದೆ. ಹೊಸ ಗ್ರಾಹಕರ ಇಮೈಲ್‌ ಸಂಗ್ರಹಿಸುವುದು ಮತ್ತು ವಿಚಾರಗಳನ್ನು ತಲುಪಿಸುವುದು ಇಲ್ಲಿನ ಅಗತ್ಯವಾಗಿರುತ್ತದೆ. ಈ ಮೂಲಕ ಗ್ರಾಹಕರಿಗೆ ಹೊಸ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
4. ಸರ್ಚ್ ಇಂಜಿನ್ ಆಪ್ಟಿಮೈಸೇಶನ್ (SEO): ಸರ್ಚ್ ಎಂಜಿನ್ ಅಲ್ಗಾರಿದಮ್ ಪ್ರಕಾರ ವೆಬ್ ಸೈಟ್ ಅನ್ನು ರಚಿಸುವುದು ಹಾಗೂ ಗೂಗಲ್‌ನಂತಹ ಮಾಧ್ಯಮಗಳಲ್ಲಿ ಮೇಲ್ಪಂಕ್ತಿಯಲ್ಲಿ ಕಾಣಿಸಿಕೊಳ್ಳುವುದು ಎಸ್‌ಇಒನ ಆದ್ಯತೆಯಾಗಿರುತ್ತದೆ. ಯಾವುದೇ ಕೀವರ್ಡ್‌ ಮೂಲಕ ಹುಡುಕುವಾಗ ಸರ್ಚ್‌ ಎಂಜಿನ್ ನಲ್ಲಿ ನಿಮ್ಮ ವೆಬ್‌ಸೈಟ್‌ ಹೆಚ್ಚು ಗೋಚರಿಸಿದರೆ, ನಿಮ್ಮ ಉತ್ಪನ್ನ ಅಥವಾ ಸೇವೆಯ ಮಾರಾಟಕ್ಕೆ ಹೆಚ್ಚಿನ ಅವಕಾಶಗಳಿವೆ.ಉದಾಹರಣೆಗೆ ಅಮೇಜಾನ್‌ ಅಂತ ಹೊಡೆದಾಕ್ಷಣ ಅದು ಕಾಣಿಸಿಕೊಳ್ಳುವುದು.
5. ಸ್ಪರ್ಧಾತ್ಮಕ ವಿಶ್ಲೇಷಣೆ: ವ್ಯವಹಾರದಲ್ಲಿ ಆನ್‌ಲೈನ್‌ ಎದುರಾಳಿಯೇ ಆಫ್‌ಲೈನ್‌ ಎದುರಾಳಿಯಾಗಿರುವುದಿಲ್ಲ. ನಿಮ್ಮ ನಿಜವಾದ ಎದುರಾಳಿ ಯಾರು ಮತ್ತು ಯಾವ ಉಪಾಯದ ಮೂಲಕ ಆತ ಹೆಚ್ಚು ಜನರನ್ನು ತಲುಪುತ್ತಿದ್ದಾನೆ ಎಂದು ತಿಳಿಯಲು ಇಲ್ಲಿ ಅನೇಕ ಸಾಧನಗಳಿವೆ. ಅವರ ಉಪಾಯಗಳಿಗಿಂತ ಭಿನ್ನವಾದ ಹಾಗೂ ಹೆಚ್ಚು ಫಲಿತಾಂಶ ನೀಡುವ ಉಪಾಯಗಳನ್ನು ರೂಪಿಸಲು ಕಾಂಪಟಿಟಿವ್‌ ಅನಾಲಿಸಿಸ್‌ ಅನ್ನು ಬಳಸಿಕೊಳ್ಳಬಹುದಾಗಿದೆ.
6. ಮೊಬೈಲ್‌ ಮಾರ್ಕೆಟಿಂಗ್ : ಒಂದು ವ್ಯವಹಾರವು ಮೊಬೈಲ್‌ ಮೂಲಕ ಹೆಚ್ಚು ಜನರನ್ನು ತಲುಪಲು ಇಂದು ಅತ್ಯಧಿಕ ಅವಕಾಶವಿದೆ. ಆನ್‌ಲೈನ್‌ನ ರಿವ್ಯೂವ್‌ ಚೆನ್ನಾಗಿರುವಂತೆ ನೋಡಿಕೊಂಡು, ಉತ್ತಮ ಸರ್ವಿಸ್‌ಗಳನ್ನು ನೀಡಿದಲ್ಲಿ ಮೊಬೈಲ್‌ ಮಾರ್ಕೆಟಿಂಗ್‌ ಗೆ ಅಧಿಕ ಬೇಡಿಕೆಯಿದೆ. ಇದಕ್ಕಾಗಿ ಆನ್‌ಲೈನ್‌ ರೆಪ್ಯೂಟೇಶನ್‌ ಮ್ಯಾನೇಜ್‌ಮೆಂಟ್‌ ಎಂಬ ವಿಭಾಗಗಳೇ ತೆರೆದುಕೊಳ್ಳುತ್ತಿದೆ.
7. ಪಾವತಿಸಿದ ಡಿಜಿಟಲ್ ಮಾರ್ಕೆಟಿಂಗ್: ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ನಲ್ಲಿ ಸ್ವಲ್ಪ ಹಣವನ್ನು ಠೇವಣಿ ಮಾಡುವ ಮೂಲಕ ಅಥವಾ ಗೂಗಲ್‌ ಜಾಹೀರಾತುಗಳ ಮೂಲಕ ವ್ಯವಹಾರವನ್ನು ಹೆಚ್ಚು ಜನರಿಗೆ ತಲುಪಿಸಲು ಸಾಧ್ಯವಿದೆ. ನಿಮ್ಮ ಉತ್ಪನ್ನ ಅಥವಾ ಸೇವೆಯನ್ನು ಜಾಹೀರಾತಿನ ಮೂಲಕ ಮಾರಾಟ ಮಾಡುವುದು ಡಿಜಿಟಲ್‌ ಮಾರ್ಕೆಟಿಂಗ್‌ ನ ಭಾಗ.
8. ಲೀಡ್‌ ಜನರೇಶನ್‌ : ಯಾವುದೇ ವ್ಯವಹಾರಕ್ಕೆ ನಿತ್ಯದ ಗ್ರಾಹಕ ಬೇಡಿಕೆಗಳು ಅವಶ್ಯವಾಗಿರುತ್ತವೆ.ಗ್ರಾಹಕರಾಗುವ ಲಕ್ಷಣವಿರುವವರನ್ನು ಶೋಧಿಸಿ, ಅಂತವರಿಗೇ ಟಾರ್ಗೆಟ್‌ ಮಾಡಿ ಜಾಹಿರಾತು ತೋರಿಸುವುದು ಹಾಗೂ ಅವರ ಸಂಪರ್ಕ ಸಾಧಿಸುವುದು ಡಿಜಿಟಲ್‌ ಮಾರ್ಕೆಟಿಂಗ್‌ ನ ಬಹುಮುಖ್ಯ ಅಂಗವಾಗಿರುತ್ತದೆ.

ಏನೂ ತಿಳಿಯದವರೂ ತಿಂಗಳಿಗೆ ಕನಿಷ್ಟ 15ರಿಂದ 20 ಸಾವಿರ ಗಳಿಸುವ ಉದ್ಯೋಗವನ್ನು ಈ ಕೋರ್ಸ್‌ನ ಮೂಲಕ ಗಳಿಸಿಕೊಳ್ಳಬಹುದಾಗಿದೆ. ಈಗಾಗಲೇ ಉದ್ಯೋಗದಲ್ಲಿರುವವರೂ ತಮ್ಮ ಕಾರ್ಯಕ್ಷೇತ್ರ ಬದಲಿಸುವ ಸಲುವಾಗಿ ಅಥವಾ ಉದ್ಯೋಗದಲ್ಲಿದ್ದು ತಮ್ಮ ಕ್ಷಮತೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಈ ಡಿಜಿಟಲ್‌ ಮಾರ್ಕೆಟಿಂಗ್‌ ಕೋರ್ಸ್‌ ಕಲಿಯಬಹುದಾಗಿದೆ.

ಇಷ್ಟೆಲ್ಲ ಅವಕಾಶಗಳಿದ್ದೂ ಕನ್ನಡದಲ್ಲಿ ಡಿಜಿಟಲ್‌ ಮಾರ್ಕೆಟಿಂಗ್‌ನ ಅಗತ್ಯ ಕಂಡವರು ಮಾತ್ರ ವಿರಳವೆಂದೇ ಹೇಳಬೇಕು. ಹಾಗಾಗಿಯೇ ಕನ್ನಡದಲ್ಲಿ ಡಿಜಿಟಲ್‌ ಮಾರ್ಕೆಟಿಂಗ್‌ ಕೋರ್ಸ್‌ಗಳೂ ವಿರಳವಾಗಿವೆ. ಇದನ್ನು ಅರಿತಿರುವ ಕಲಾಹಂಸ ಇನ್ಫೋಟೆಕ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ, ಕನ್ನಡದಲ್ಲಿ ಡಿಜಿಟಲ್‌ ಮಾರ್ಕೆಟಿಂಗ್‌ ಕೋರ್ಸ್‌ ಆರಂಭಿಸಿದೆ. ಕಲಿಯುವ ಹಂಬಲವಿರುವವರು courses.kalahamsa.in ಎಂಬ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

Share this post

Get digital marketing Strategy for free